Railway Jobs: 10th ಪಾಸಾದವರು ಕೇಂದ್ರ ಸರ್ಕಾರಿ ಹುದ್ದೆಗೆ ಸೇರಬೇಕಾ..? ಇಲ್ಲಿದೆ ಭರ್ಜರಿ ಅವಕಾಶ

ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ ಪಾಸಾದವರು ಕೇಂದ್ರ ಸರ್ಕಾರಿ ಹುದ್ದೆಗೆ ಸೇರಬೇಕಾ..? ಹಾಗಿದ್ರೆ ಇಲ್ಲಿದೆ ಸದಾವಕಾಶ. ಈಶಾನ್ಯ ರೈಲ್ವೆಯ ನೇಮಕಾತಿ ಮಂಡಳಿಯು ಆಕ್ಟ್‌ ಅಪ್ರೆಂಟಿಸ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈಶಾನ್ಯ ರೈಲ್ವೆಯ ಯಾವ್ಯಾವ ಡಿವಿಷನ್‌ನಲ್ಲಿ ಎಷ್ಟು ಹುದ್ದೆಗಳಿವೆ ಎಂದು ಕೆಳಗಿನಂತೆ ತಿಳಿಸಲಾಗಿದೆ.

ಡಿವಿಷನ್ವಾರುಹುದ್ದೆಗಳವಿವರಮೆಕ್ಯಾನಿಕಲ್ ವರ್ಕ್‌ಶಾಪ್‌ ಗೋರಖ್‌ಪುರ್ : 411
ಸಿಗ್ನಲ್ ವರ್ಕ್‌ಶಾಪ್‌ ಗೋರಖ್‌ಪುರ್ : 63
ಬ್ರಿಡ್ಜ್‌ ವರ್ಕ್‌ಶಾಪ್‌ ಗೋರಖ್‌ಪುರ್‌ : 35
ಮೆಕ್ಯಾನಿಕಲ್ ವರ್ಕ್‌ಶಾಪ್‌ ಇಜ್ಜಾತ್‌ ನಗರ್ : 151
ಡೀಸೆಲ್ ಶೇಡ್‌ ಇಜ್ಜಾತ್ ನಗರ್ : 60
ಕ್ಯಾರಿಯೇಜ್ ಅಂಡ್ ವ್ಯಾಗನ್ ಇಜ್ಜಾತ್ ನಗರ್ : 64
ಕ್ಯಾರಿಯೇಜ್ ಅಂಡ್ ವ್ಯಾಗನ್ ಲಕ್ನೊ ಜಂಕ್ಷನ್ : 155
ಡೀಸೆಲ್‌ ಶೆಡ್ ಗೊಂಡ : 90
ಕ್ಯಾರಿಯೇಜ್ ಅಂಡ್ ವ್ಯಾಗನ್ ವಾರಣಾಸಿ : 75
ಒಟ್ಟು ಹುದ್ದೆಗಳ ಸಂಖ್ಯೆ : 1104

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ / ಐಟಿಐ ಪಾಸ್‌. ಅಭ್ಯರ್ಥಿಗಳು ಐಟಿಐ ವಿದ್ಯಾರ್ಹತೆ ಅನ್ನು ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಪಾಸ್‌ ಮಾಡಿ, ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು.

ವಯಸ್ಸಿನಅರ್ಹತೆಗಳು : ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ಪ್ರಮುಖದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-07-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 02-08-2023 ರ ಸಂಜೆ 05 ಗಂಟೆವರೆಗೆ.

ಅಪ್ಲಿಕೇಶನ್‌ ಶುಲ್ಕ ರೂ.100.

ಎಸ್‌ಸಿ / ಎಸ್‌ಟಿ / ಆರ್ಥಿಕವಾಗಿ ಹಿಂದುಳಿದವರು / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಮಾಡಬಹುದು.

ಅರ್ಜಿಸಲ್ಲಿಸುವುದುಹೇಗೆ?– ಈಶಾನ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ ವಿಳಾಸ https://rrcgorakhpur.net/register.php ಕ್ಕೆ ಭೇಟಿ ನೀಡಿ.
– ಓಪನ್‌ ಆದ ಪೇಜ್‌ನಲ್ಲಿ ‘REGISTER’ ಎಂಬಲ್ಲಿ ಕ್ಲಿಕ್ ಮಾಡಿ.
– ನಂತರ ಅಭ್ಯರ್ಥಿಗಳು ಸೂಚನೆಗಳನ್ನು ಓದಿಕೊಂಡು ಅರ್ಜಿ ಪೂರ್ಣಗೊಳಿಸಿ

ಉದ್ಯೋಗ ವಿವರ

ಹುದ್ದೆಯ ಹೆಸರು ಅಪ್ರೆಂಟಿಸ್ ಹುದ್ದೆಗಳು
ವಿವರ ಈಶಾನ್ಯ ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ.
ಪ್ರಕಟಣೆ ದಿನಾಂಕ 2023-07-03
ಕೊನೆ ದಿನಾಂಕ 2023-08-02
ಉದ್ಯೋಗ ವಿಧ ಇಂಟರ್ನ್‌
ಉದ್ಯೋಗ ಕ್ಷೇತ್ರ ರೈಲ್ವೆ ಉದ್ಯೋಗ
ವೇತನ ವಿವರ INR 8000/Month
Raja Arslan

Leave a Comment